ಬುಧವಾರ, ಮಾರ್ಚ್ 24, 2010

ಒಲವಿರದ ಬದುಕು

ಒಲವಿರದ ಬದುಕು
ಮರಳುಗಾಡಿನ ವಿಶಾಲತೆಯ೦ತೆ
ಜೀವ ಚೇತನವಿಲ್ಲದ ಬರಿ ಮರಳರಾಶಿ
ಏನಿದ್ದರೇನಂತೆ, ಎಷ್ಟಿದ್ದರೇನಂತೆ,
ಪ್ರೇತಿಯ ಮಳೆ ಸುರಿವವರೆಗೆ
ಹೃದಯ ಒಯಾಸಿಸ್ ಅಗುವವರೆಗೆ,
ಹಸಿರು ಚಿಗುರು ಮೂಡುವವರೆಗೆ.

ಜೀವ ಕೊಡದ ಬ೦ಜರಿನ೦ತೆ
ಪ್ರೀತಿಸದ ಹೃದಯ.

--ತೇಜ

ಶನಿವಾರ, ಮಾರ್ಚ್ 06, 2010

Most romantic lie


ಗೆಳತಿ,
ನೀನೊಮ್ಮೆ ನನ್ನ ಕಣ್ನಲ್ಲಿ
ಕಣ್ಣಿಟ್ಟು ನೋಡು
ಆಗ ತಿಳಿವುದು ನಿನಗೆ,
ಈ ನನ್ನ ಕಣ್ಣಲ್ಲಿ ನಿನ್ನ ಬಿಂಬ ಬಿಟ್ಟರೆ
ಬೇರೆ ಪ್ರತಿಬಿಂಬ ಮೂಡದೆಂದು.
--ತೇಜ