ಕಿರು ಹಣತೆಯ
ಆವರಿಸಿದ ಕತ್ತಲು
ಬತ್ತಿ ಆರುವದನ್ನೇ
ಕಾಯುತಿತ್ತು.
ಕೋಣೆಯಲ್ಲಿ ಅಡರಿದ್ದ
ನಿಶ್ಯಬ್ದ, ಕ್ಷೀಣ ನರಳಿಕೆಗೆ
ಕಿವಿಕೊಡದೆ,
ಸ್ತಬ್ದವಾಗಿತ್ತು.
ಆಗೊಮ್ಮೆ ಈಗೊಮ್ಮೆ
ಹೊರ ಬರುತ್ತಿದ್ದ ಉಸಿರು
ದೀಪ ಹಾರೀತೆಂದು,
ಮತ್ತಷ್ಟು ನಿಧಾನವಾಗುತ್ತಿತ್ತು.
ತುಂಬಿದ ನರಕದ
ಬಾಗಿಲು ಮುಚ್ಚಿ
ನಿರಾಶ್ರಿತರಿಗೆಂದು, ತುಸು ಸಮಯ
ಸ್ವರ್ಗದ ಬಾಗಿಲು ತೆರೆದಿತ್ತು.
--ತೇಜ
ಜನವರಿ ೨೯, ೨೦೧೬