ರೇಖೆಗಳು
ಅಸ್ಪಷ್ಟ ಚಿತ್ರಗಳು
ಒತ್ತತ್ತಾಗಿ ಚಲಿಸುತ್ತಿವೆ
ಒಂದೊಂದು ವಕ್ರ , ನೇರ, ರೇಖೆಗಳಲಿ
ಅಗಣಿತ ಸಂಖ್ಯೆಗಳಲಿ.
ಒಂದೊಂದು ಇನ್ನೊಂದಿಕ್ಕೆ
ಒಂದಿಲ್ಲೊಂದು ಬಿಂದುವಿನಲ್ಲಿ
ಸಂದಿಸಿವೆ ಎಂತದೋ ಕಾರಣಕ್ಕೆ
ಅರ್ಥವಾಗದಿದ್ದಕ್ಕೆ ಏನೋ
ಎಲ್ಲಾ ಸರಿ ಎನಿಸುತ್ತಿದೆ
ರಚನೆಗಳ ನಿಯಮಗಳು
ಕಣ್ಣ ಮುಂದಿರುವ ತಾಳೆ ಗಳೊಂದಿಗೆ.
ಸ್ಪಷ್ಟ ಕಾರಣವಿದೆಯೋ ಇಲ್ಲವೋ
ಈ ಅಸ್ಪಷ್ಟ ರಚನೆಗಳಿಗೆ
ಆದರೂ ಸ್ಪಷ್ಟವಾಗಿ ಹುಟ್ಟಿಕೊಂಡಿವೆ
ತಮ್ಮಿ ಸ್ಟಕ್ಕೋ ಅಥವಾ ಬೇರೆ ಯಾವುದೋ ನೆಪಕ್ಕೆ
ಗೊಂದಲವಿರುವುದೇ ಇಲ್ಲಿ
ಒಂದೊಂದು ಎಳೆ ಬಿಡಿಸಿ ಅರ್ಥೈಸಬೇಕೋ
ಅಥವಾ
ಅರ್ಥವಾಗದ ಸಂಕೀರ್ಣ ಚಿತ್ರವ
ಸುಮ್ಮನೆ ಒಟ್ಟಾರೆ ಅಂಗೀಕರಿಸಬೇಕೋ???
-ತೇಜ
3 ಕಾಮೆಂಟ್‌ಗಳು:
tumba chennagidey kano.....super
Kavana tumba saviyaagide. Adare kannada aksharagaLu spuTavaagi irade besaravaytu. Net nalli kannada aksharagaLannu chennagi mooDisalu sadhyavagabahude?
good 1! :)
ಕಾಮೆಂಟ್ ಪೋಸ್ಟ್ ಮಾಡಿ