ನಲ್ಲ-ನಲ್ಲೆ
--ತೇಜ
ಆಕಾಶ ತಬ್ಬಿದ
ಇಳೆಗೆ ಮಳೆಯ
ಸ್ಪರ್ಶ,
ನಲ್ಲನ ತಬ್ಬಿದ
ನಲ್ಲೆಗೆ ಮುತ್ತಿನ
ವರ್ಷ.
ತಣ್ಣನೆಯ ರಾತ್ರಿಯಲಿ,
ಧರೆಗೆ ಚಂದಿರನೆ
ಸಖ,
ಯವ್ವನದ ರಾತ್ರಿಯಲಿ,
ನಲ್ಲೆಗೆ ನಲ್ಲನ ಬಿಸಿಯಪ್ಪುಗೆಯ
ಸಗ್ಗ.
ಸಂಜೆ ಸೂರ್ಯ
ಕಡಲ ಸೇರಲು,
ಆಕಾಶ ನಾಚಿ ಕೆಂಪಾಯ್ತು.
ರಾತ್ರಿ,
ನಲ್ಲೆಯು ನಲ್ಲನ
ಕಡಲ ಸೇರಲು,
ಆಕಾಶ ನಾಚಿ ಕೆಂಪಾಯ್ತು.
ರಾತ್ರಿ,
ನಲ್ಲೆಯು ನಲ್ಲನ
ತೋಳು ಸೇರಲು,
ಮಂಚದಡಿಯ ಕತ್ತಲು
ನಾಚಿ ಮತ್ತಷ್ಟು ಕಪ್ಪಾಯ್ತು!
ಮಂಚದಡಿಯ ಕತ್ತಲು
ನಾಚಿ ಮತ್ತಷ್ಟು ಕಪ್ಪಾಯ್ತು!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ