ಭಾನುವಾರ, ಡಿಸೆಂಬರ್ 06, 2009

ಸಂಗಾತಿ

ನನ್ನ ಹೃದಯಕೆ ಪ್ರೀತಿ ಭಾಷೆ ಕಲಿಸಿದವಳ ನೆನಪಿನಲ್ಲಿ ಈ ಕವನ.


ಸಂಗಾತಿ

ರಾತ್ರಿಯ ತಿಳಿ ನೀಲಿ ಆಗಸದಲಿ
ಬೆಳ್ಳಕ್ಕಿ ಸಾಲು ಬೆಳ್ಳಿ ಮೋಡಗಳು
ಮೋಡದ ಮರೆಯಲಿ ನಗುತಾಳೆ
ನನ್ನವಳು

ತಂಗಾಳೀಯಂತೆ ಸುಳಿದವಳು
ಮನಕೆ ತಂಪು
ಪ್ರೀತಿಗೆ ಕಂಪು ಎರೆದವಳು
ಸದ್ದಿಲ್ಲದೇ ಮರೆಯಾದವಳು


ಡವ ಡವ ಬಡಿವ ಹೃದಯಕೆ
ಪ್ರೇಮ ಭಾಷೆ ಕಲಿಸಿದವಳು
ಕಲಿತ ಭಾಷೆಯ ನೂಡಿವ ಮೊದಲೇ
ಕಣ್ಣಿ೦ದ ದೂರಾದವಳು

ನನ್ನೆದೆಯ ಬಾಂದಲದಲ್ಲಿ
ಮಿನುಗು ತಾರೆ ಇವಳು
ಸ್ಪೂರ್ತಿಯ ಚಿಲುಮೆ ಈ ಜೀವಕೆ
ಅದೃಶ್ಯ ಸಂಗಾತಿ ನನ್ನ ಬಾಳಿಗೆ.


--ತೇಜ

2 ಕಾಮೆಂಟ್‌ಗಳು:

Gajendra ಹೇಳಿದರು...
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Theja ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.