ಬುಧವಾರ, ಫೆಬ್ರವರಿ 09, 2011

ಪ್ರೀತಿಯ ಹಕ್ಕಿ

ಎದೆಯ ಮೂಲೆಯಲ್ಲೊಂದು ಪ್ರೀತಿಯ
ಹಕ್ಕಿ ಗೂಡು ಕಟ್ಟಲಿ
ಒಂದೊಂದೇ ನವಿರು ಗರಿ
ಹೆಣೆದ ಸುಂದರಿ ನಗರಿ
ಪ್ರೇಮದ ಚಿತ್ತಾರ ಸುತ್ತೆಲ್ಲಾ
ನಿನ್ನದೆ ಇಂಚರ ಮನದಲ್ಲೆಲ್ಲಾ ತುಂಬಲಿ
ಬೆಚ್ಚನೆಯ ಗೂಡಿನಲ್ಲಿ
ಬೆರೆಯಲಿ ಯುವ ಜೋಡಿಗಳು
ಉಲಿಯಲಿ ಪ್ರೇಮ ಕಾವ್ಯ
ನಲಿಯಲಿ ಜೊತೆಯಲಿ

ಈ ಜಗದ ಸೃಷ್ಟಿಯ ಸೆಲೆ
ಎಲ್ಲಾ ಜೀವಿಗಳ ಹಿಡಿದಿಡುವ ಬಲೆ
ಪ್ರೀತಿ, ಈ ಹೃದಯದ ಸುಮದುರ ಕಲೆ
ಪ್ರೀತಿ, ನೀನಿಲ್ಲದೇ ಈ ಜೀವಕ್ಕೆಲ್ಲಿದೆ ಬೆಲೆ.

--ತೇಜ

ಕಾಮೆಂಟ್‌ಗಳಿಲ್ಲ: